ಚಿತ್ರ / ಧ್ವನಿಸುರುಳಿ:ಕಂಡೇನು ಶ್ರೀರಂಗನಾಥನ 
ಸಂಗೀತ:ಮಹೇಶ್ ಮಹದೇವ್
ಗಾಯನ:ಪ್ರಿಯದರ್ಶಿನಿ
ಸಾಹಿತ್ಯ: ಕೈವಾರ ತಾತಯ್ಯ
ಬಿಡುಗಡೆ ವರ್ಷ: ಪಿ.ಎಂ.ಆಡಿಯೋಸ್
ರಾಗ:ಪೀಲು 
ಶ್ರುತಿ:ಬಿ 
ತಾಳ: ೬/೮
ಲಯ:~ ೯೨ ಬಿಪಿಎಂ 

ಪಲ್ಲವಿ:
ಇಲ್ಲಿ ನೀ ನಿವಾಸ ಮಾಡಿರುವುದೇನೂ 
ಇಲ್ಲಿ ನೀ ನಿವಾಸ ಮಾಡಿರುವುದೇನೂ
ದೇಶಾಧಿಕಾಪತಿಯೇ ಶ್ರೀ ಲಕ್ಷ್ಮೀನಾಥ
ದೇಶಾಧಿಕಾಪತಿಯೇ ಶ್ರೀ ಲಕ್ಷ್ಮೀನಾಥ
ಇಲ್ಲಿ ನೀ ನಿವಾಸ ಮಾಡಿರುವುದೇನೂ

ಚರಣ ೧
ಪ್ರಳಯಾಬ್ಧಿ ಜಲತುಂಬಿದಾಗ ಸ್ಥಳವಿಲ್ಲದೆ 
ವಾರಿಧಿಯಮೇಲೆ ವಟಪತ್ರ ಶಯನಮಾಡಿ
ಪ್ರಳಯಾಬ್ಧಿ ಜಲತುಂಬಿದಾಗ ಸ್ಥಳವಿಲ್ಲದೆ 
ವಾರಿಧಿಯಮೇಲೆ ವಟಪತ್ರ ಶಯನಮಾಡಿ 
ಇನ್ನೆಷ್ಟು ದಿವಸ ಈ ಬಗೆಯಲ್ಲಿರುವುದೆಂದು
ಇನ್ನೆಷ್ಟು ದಿವಸ ಈ ಬಗೆಯಲ್ಲಿರುವುದೆಂದು  
ಜಲವಷ್ಟು ತೆಗೆದು ಜನರ ನಿರ್ಮಿಸಿದಾಗ ಬಂದ್ಯೋ 
ಜಲವಷ್ಟು ತೆಗೆದು ಜನರ ನಿರ್ಮಿಸಿದಾಗ ಬಂದ್ಯೋ 
ಇಲ್ಲಿ ನೀ ನಿವಾಸ ಮಾಡಿರುವುದೇನೂ
ದೇಶಾಧಿಕಾಪತಿಯೇ ಶ್ರೀ ಲಕ್ಷ್ಮೀನಾಥ
ಇಲ್ಲಿ ನೀ ನಿವಾಸ ಮಾಡಿರುವುದೇನೂ

ಚರಣ ೨
ನರಸಿಂಹ ನಾನೆಂದು-ನರಮೃಗಕೃತಿ ತಾಳಿ  
ರಕ್ಕಸನ ಸೀಳಿ ರೌಧ್ರವ ಮಾಡಲು 
ನರಸಿಂಹ ನಾನೆಂದು-ನರಮೃಗಕೃತಿ ತಾಳಿ  
ರಕ್ಕಸನ ಸೀಳಿ ರೌಧ್ರವ ಮಾಡಲು 
ಸಿರಿದೇವಿ ಪ್ರಹ್ಲಾದ - ಸುರಸಿದ್ಧ ಮುನಿಜನರು
ಸಿರಿದೇವಿ ಪ್ರಹ್ಲಾದ - ಸುರಸಿದ್ಧ ಮುನಿಜನರು 
ಉಗ್ರನನ್ನು ನೋಡಿ ವಂಧಿಸಿದಾಗ ಬಂದ್ಯೋ 
ಉಗ್ರನನ್ನು ನೋಡಿ ವಂಧಿಸಿದಾಗ ಬಂದ್ಯೋ
ಇಲ್ಲಿ ನೀ ನಿವಾಸ ಮಾಡಿರುವುದೇನೂ
ದೇಶಾಧಿಕಾಪತಿಯೇ ಶ್ರೀ ಲಕ್ಷ್ಮೀನಾಥ
ಇಲ್ಲಿ ನೀ ನಿವಾಸ ಮಾಡಿರುವುದೇನೂ

ಚರಣ  ೩
ಕರಿಗಮನ ಕೈವರದ -ಪುರವಾಸನೆ 
ಮೌನದಲಿ ಇನ್ನೆಷ್ಟು - ಕಾಲವಿರಲು
ಕರಿಗಮನ ಕೈವರದ -ಪುರವಾಸನೆ 
ಮೌನದಲಿ ಇನ್ನೆಷ್ಟು - ಕಾಲವಿರಲು 
ನಿನ್ನ ಮಾತಾಡಿಸುವ - ಭಕ್ತರನು ನಾಕಾಣೆ
ನಿನ್ನ ಮಾತಾಡಿಸುವ - ಭಕ್ತರನು ನಾಕಾಣೆ  
ಅಮರ ನಾರೇಯಣ - ಹರಿ ಯೆನ್ನ ಸಲಹೊ
ಅಮರ ನಾರೇಯಣ - ಹರಿ ಯೆನ್ನ ಸಲಹೊ
ಇಲ್ಲಿ ನೀ ನಿವಾಸ ಮಾಡಿರುವುದೇನೂ 
ದೇಶಾಧಿಕಾಪತಿಯೇ ಶ್ರೀ ಲಕ್ಷ್ಮೀನಾಥ
ಇಲ್ಲಿ ನೀ ನಿವಾಸ ಮಾಡಿರುವುದೇನೂ

ವರ್ಗ: ಭಕ್ತಿಗೀತೆಗಳು
ವರ್ಗ: ಕೈವಾರ ತಾತಯ್ಯ ಸಾಹಿತ್ಯ
ವರ್ಗ: ಮಹೇಶ್ ಮಹದೇವ್ ಸಂಗೀತ